ಚುಂಗಾ ಪಿಠಾ (ಸುಂಗಾ ಪಿಠಾ) ಬಾಂಗ್ಲಾದೇಶದ ಸಿಲ್ಹೆಟ್ ಪ್ರದೇಶದಲ್ಲಿ ತನ್ನ ಮೂಲವನ್ನು ಹೊಂದಿರುವ ಅಕ್ಕಿಯ ಒಂದು ಸಾಂಪ್ರದಾಯಿಕ ಬಿಲ್ಲೆಖಾದ್ಯ. ಬಿದಿರು ಮತ್ತು ಅಂಟಂಟಾದ ಅನ್ನ ಚುಂಗಾ ಪಿಠಾದ ಮುಖ್ಯ ಘಟಕಾಂಶಗಳಾಗಿದ್ದರೂ, ಇದನ್ನು ಬಿನ್ನಿ ಅಕ್ಕಿ, ಹಾಲು, ಸಕ್ಕರೆ, ಕೊಬ್ಬರಿ ಮತ್ತು ಅಕ್ಕಿ ಪುಡಿಯಿಂದ ಕೂಡ ತಯಾರಿಸಬಹುದು. ಅಂಟು ಅನ್ನವನ್ನು ಎಳೆ ಬಿದಿರಿನೊಳಗೆ ತುಂಬಿ ಹೊಗೆಯಲ್ಲಿ ನಿಧಾನವಾಗಿ ಬೇಯಿಸಿ ಈ ಅನನ್ಯ ಖಾದ್ಯವನ್ನು ತಯಾರಿಸಲಾಗುತ್ತದೆ. ಈ ಸಾಂಪ್ರದಾಯಿಕ ಖಾದ್ಯವು ಅಸ್ಸಾಮಿ ಜನರಲ್ಲಿಯೂ ಪ್ರಸಿದ್ಧವಾಗಿದೆ. ಸಿಲ್ಹೆಟ್‍ನ ವಿವಿಧ ಬುಡಕಟ್ಟುಗಳು ಬಿದಿರನ್ನು ಕತ್ತರಿಸಿ ಅದರೊಳಗೆ ನೆನೆಸಿದ ಅಕ್ಕಿಯನ್ನು ಹಾಕುವ ಸಂಪ್ರದಾಯವನ್ನು ಹೊಂದಿದ್ದವು. ಕ್ರಮೇಣವಾಗಿ, ಈ ಆಹಾರವು ಗುಡ್ಡಗಾಡು ಪ್ರದೇಶದಿಂದ ಬಯಲಿನಲ್ಲಿ ವಾಸಿಸುವ ಸಿಲ್ಹೆಟಿಗಳಲ್ಲಿ ಜನಪ್ರಿಯವಾಗಲು ಶುರುವಾಯಿತು. ಕಾಲಕ್ರಮೇಣ, ಈ ಚುಂಗಾ (ಬಿದಿರಿನ ಕೊಳವೆ) ಖಾದ್ಯವು ಚುಂಗಾ ಪಿಠಾ ಎಂದು ಪರಿಚಿತವಾಯಿತು. == ಉಲ್ಲೇಖಗಳು ==